ಇಂದು ಬೆಳ್ಳಿಯ ದರದಲ್ಲಿ ಕಂಡ ಏರಿಕೆ ಇತಿಹಾಸದಲ್ಲೇ ಅತ್ಯಂತ ದೊಡ್ಡದು ಎನ್ನಲಾಗಿದೆ. ಕೇವಲ ಒಂದೇ ದಿನದಲ್ಲಿ ಬೆಳ್ಳಿಯ ಬೆಲೆಯು ಪ್ರತಿ ಕಿಲೋಗ್ರಾಂಗೆ 4,000 ರೂಪಾಯಿ ಏರಿಕೆಯಾಗಿದೆ. ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, ಮಂಗಳವಾರದ ಮುಕ್ತಾಯದ ದರ 2,64,500 ರೂ. ಇತ್ತು. ಆದರೆ ಇಂದು ಇದು ಶೇಕಡಾ 1.5 ರಷ್ಟು ಏರಿಕೆಯಾಗಿ 2,68,500 ರೂಪಾಯಿಗೆ ತಲುಪಿದೆ. ಬೆಳ್ಳಿ ಪದಾರ್ಥಗಳನ್ನು ಖರೀದಿಸಲು ಯೋಜಿಸುತ್ತಿದ್ದ ಮಧ್ಯಮ ವರ್ಗದ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.